Revelation of John 22

1ಆ ಮೇಲೆ ಅವನು ಸ್ಫಟಿಕದಂತೆ ಅತಿಶುದ್ಧವಾಗಿದ್ದ
22:1 ಯೆಹೆ. 47:1-12; ಜೆಕ. 14:8:
ಜೀವಜಲದ ನದಿಯನ್ನು ನನಗೆ ತೋರಿಸಿದನು. ಅದು ದೇವರ ಮತ್ತು ಯಜ್ಞದ ಕುರಿಮರಿಯಾದಾತನ ಸಿಂಹಾಸನದಿಂದ ಹೊರಟು,
2ಪಟ್ಟಣದ ಬೀದಿಯ ಮಧ್ಯದಲ್ಲಿ ಹರಿಯುತ್ತಿತ್ತು.
22:2 ಯೆಹೆ. 47:12:
ಆ ನದಿಯ ಎರಡು ದಡಗಳಲ್ಲಿ
22:2 ಆದಿ. 2:9; ಪ್ರಕ. 22:14, 19; 2:7:
ಜೀವವೃಕ್ಷವಿತ್ತು. ಅದು ಪ್ರತಿ ತಿಂಗಳು ಒಂದೊಂದ್ದು ತರಹದ ಫಲವನ್ನು ಬಿಡುತ್ತಾ
22:2 ಅಥವಾ, ಹನ್ನೆರಡು ಸಾರಿ ಬಿಡುತ್ತವೆ; ಯೆಹೆ. 47:12:
ಹನ್ನೆರಡು ತರಹದ ಫಲಗಳನ್ನು ಕೊಡುತ್ತದೆ.
22:2 ಪ್ರಕ. 21:24:
ಆ ಮರದ ಎಲೆಗಳು ಜನಾಂಗಗಳವರನ್ನು ವಾಸಿಮಾಡುವಂಥದಾಗಿದ್ದವು.

3
22:3 ಯೆಹೆ. 14:11; ಆದಿ. 3:17:
ಇನ್ನೂ ಯಾವ ಶಾಪವು ಇರುವುದಿಲ್ಲ.
22:3 ಯೆಹೆ. 48:35; ಪ್ರಕ. 21:3, 23:
ಆ ಪಟ್ಟಣದಲ್ಲಿ ದೇವರ ಮತ್ತು ಯಜ್ಞದ ಕುರಿಮರಿಯಾತನ ಸಿಂಹಾಸನವಿರುವುದು.
22:4 ಪ್ರಕ. 7:15:
ಆತನ ಸೇವಕರು ಆತನಿಗೆ ಸೇವೆ ಮಾಡುವರು.
4
22:4 ಮತ್ತಾ 5:8; 1 ಕೊರಿ. 13:12; 1 ಯೋಹಾ. 3:2:
ಅವರು ಆತನ ಮುಖವನ್ನು ನೋಡುವರು.
22:4 ಪ್ರಕ. 3:12; 7:3; 14:1:
ಅವರ ಹಣೆಯ ಮೇಲೆ ಆತನ ಹೆಸರು ಇರುವುದು.
5ಇನ್ನು ರಾತ್ರಿಯೇ ಇರುವುದಿಲ್ಲ. ಅವರಿಗೆ
22:5 ಕೀರ್ತ. 36:9; ಪ್ರಕ. 21:11, 23-25:
ದೀಪದ ಬೆಳಕೂ ಸೂರ್ಯನ ಬೆಳಕೂ ಬೇಕಾಗಿರುವುದಿಲ್ಲ. ದೇವರಾದ ಕರ್ತನೇ ಅವರಿಗೆ ಬೆಳಕಾಗಿರುವನು.
22:5 ದಾನಿ. 7:18, 27; ರೋಮಾ. 5:17; 2 ತಿಮೊ. 2:12; ಪ್ರಕ. 20:4:
ಅವರು ಯುಗಯುಗಾಂತರಗಳಲ್ಲಿಯೂ ಆಳುವರು.

ಯೇಸುವಿನ ಪುನರಾಗಮನ

6ಆ ಮೇಲೆ ದೇವದೂತನು ನನಗೆ,
22:6 ಪ್ರಕ. 21:5
<<ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ. ಪ್ರವಾದಿಗಳ ಆತ್ಮಗಳನ್ನು ಪ್ರೇರೇಪಿಸುವ ದೇವರಾದ ಕರ್ತನು ಅತಿಶೀಘ್ರದಲ್ಲಿ ಸಂಭವಿಸತಕ್ಕ ಸಂಗತಿಗಳನ್ನು ತನ್ನ ದಾಸರಿಗೆ ತೋರಿಸುವುದಕ್ಕಾಗಿ
22:6 ಪ್ರಕ. 1:1:
ತನ್ನ ದೇವದೂತನನ್ನು ಕಳುಹಿಸಿಕೊಟ್ಟನು.

7<<ಇಗೋ ನೋಡು! ನಾನು
22:7 ಪ್ರಕ. 3:11; 22:12, 20:
ಅತಿಬೇಗನೆ ಬರುತ್ತೇನೆ!
22:7 ಪ್ರಕ. 1:3.
ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನಾ ವಾಕ್ಯಗಳನ್ನು ಕೈಕೊಂಡು ನಡೆಯುವವನು ಧನ್ಯನು>> ಎಂದು ಹೇಳಿದನು.

8
22:8 ಪ್ರಕ. 1:1; 4:9:
ಯೋಹಾನನೆಂಬ ನಾನೇ, ಈ ಸಂಗತಿಗಳನ್ನು ಕೇಳಿದವನೂ ನೋಡಿದವನೂ ಆಗಿದ್ದೇನೆ. ನಾನು ಈ ಸಂಗತಿಗಳನ್ನು ಕೇಳಿ ಕಂಡಾಗ, ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನನ್ನು ಆರಾಧಿಸಬೇಕೆಂದು ಅವನ ಪಾದಕ್ಕೆ ಬಿದ್ದೆನು.
9ಆದರೆ
22:9 ಪ್ರಕ. 9:10
ಅವನು ನನಗೆ, <<ನೀನು ಹಾಗೆ ಮಾಡಬೇಡ! ನೋಡು. ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ,
22:9 ಪ್ರಕ. 1:3:
ಈ ಪುಸ್ತಕದಲ್ಲಿ ಬರೆದಿರುವ ವಾಕ್ಯಗಳನ್ನು ಕೈಕೊಂಡು ನಡೆಯುವವರಿಗೂ ಸೇವೆಯನ್ನು ಮಾಡುವ ಸೇವಕನಾಗಿದ್ದೇನೆ. ದೇವರನ್ನೇ ಆರಾಧಿಸು>> ಎಂದು ಹೇಳಿದನು.

10ಇದಲ್ಲದೆ ಅವನು ನನಗೆ ಈ ಪುಸ್ತಕದಲ್ಲಿರುವ
22:10 ಮೂಲ:ವಾಕ್ಯಗಳನ್ನು ಗುಪ್ತವಾಗಿಡಬೇಡ.
<<ಪ್ರವಾದನಾ ವಾಕ್ಯಗಳಿಗೆ ಮುದ್ರೆಹಾಕಬೇಡ. ಏಕೆಂದರೆ ಇವು ನೆರವೇರುವ ಕಾಲವು ಸಮೀಪವಾಗಿದೆ.
11
22:11 ಯೆಹೆ. 3 27; ದಾನಿ. 12:10; 2 ತಿಮೊ. 3:13:
ಅನ್ಯಾಯ ಮಾಡುವವನು ಇನ್ನೂ ಅನ್ಯಾಯ ಮಾಡಲಿ. ಮೈಲಿಗೆಯಾಗಿರುವವನು ತನ್ನನ್ನು ಇನ್ನು ಮೈಲಿಗೆಯ ಮಾಡಿಕೊಳ್ಳಲಿ, ನೀತಿವಂತನು ಇನ್ನೂ ನೀತಿವಂತನಾಗಲಿ ಮತ್ತು ಪವಿತ್ರನು ತನ್ನನ್ನು ಇನ್ನೂ ಪವಿತ್ರ ಮಾಡಿಕೊಳ್ಳಲಿ.>>

12<<ನೋಡು! ನಾನು ಬೇಗನೇ ಬರುತ್ತೇನೆ.
22:12 ಮತ್ತಾ 16:27; ರೋಮಾ. 2:6; 14 12; ಇಬ್ರಿ. 9:27:
ನಾನು ಪ್ರತಿಯೊಬ್ಬನಿಗೂ ಅವನವನ ನಡತೆಗೆ ತಕ್ಕಂತೆ ಕೊಡತಕ್ಕ
22:12 ಯೆಶಾ. 40. 10; 62:11:
ಪ್ರತಿಫಲವು ನನ್ನಲ್ಲಿದೆ.
13ನಾನೇ
22:13 ಪ್ರಕ. 1:8:
ಆದಿಯೂ, ಅಂತ್ಯವೂ,
22:13 ಪ್ರಕ. 1:17; 1:4:
ಮೊದಲನೆಯವನೂ, ಕಡೆಯವನೂ,
22:13 ಪ್ರಕ. 21:6:
ಪ್ರಾರಂಭವೂ, ಸಮಾಪ್ತಿಯೂ ಆಗಿದ್ದೇನೆ.

14
22:14 ಪ್ರಕ. 7:14
ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡು ಶುದ್ಧರಾಗಿರುವವರು ಧನ್ಯರು. ಅವರಿಗೆ
22:14 ಪ್ರಕ. 22:2, 19:
ಜೀವವೃಕ್ಷದ ಹಕ್ಕು ಇರುವುದು.
22:14 ಕೀರ್ತ. 118:20; ಪ್ರಕ. 21:27:
ಅವರು ಬಾಗಿಲುಗಳ ಮೂಲಕ ಆ ಪಟ್ಟಣದೊಳಗೆ ಬಂದು ಸೇರುವರು.
15ಆದರೆ ನಾಯಿಗಳಂತಿರುವವರೂ, ಮಾಟಗಾರರೂ, ಜಾರರೂ, ಕೊಲೆಗಾರರೂ, ವಿಗ್ರಹಾರಾಧಕರೂ, ಸುಳ್ಳನ್ನು ಪ್ರೀತಿಸಿ ಅದನ್ನು ಅಭ್ಯಾಸಮಾಡುವವರೆಲ್ಲರೂ
22:15 ಮತ್ತಾ 8:12; ಗಲಾ. 5:19-21; ಪ್ರಕ. 21:8:
ಹೊರಗಿರುವರು>> ಎಂದು ಹೇಳಿದನು.

16<<ಯೇಸುವೆಂಬ ನಾನು
22:16 ಪ್ರಕ. 1:4:
ನನ್ನ ಸಭೆಗಳ ವಿಷಯವಾಗಿ ನಿಮಗೆ ಸಾಕ್ಷಿ ಹೇಳುವುದಕ್ಕೆ
22:16 ಪ್ರಕ. 1:1:
ನನ್ನ ದೂತನನ್ನು ಕಳುಹಿಸಿಕೊಟ್ಟೆನು. ನಾನು
22:16 ಪ್ರಕ. 5:5:
ದಾವೀದನ ವಂಶವೆಂಬ ಬುಡದಿಂದ ಹುಟ್ಟಿದ ಬೇರೂ
22:16 2 ಸಮು. 7:12-16; ಯೆಶಾ. 11:1; ರೋಮಾ. 1:3:
ಅವನ ಸಂತತಿಯೂ
22:16 ಅರಣ್ಯ. 24:17; ಯೆಶಾ. 60. 3; ಮತ್ತಾ 2:2; ಪ್ರಕ. 2:28:
ಪ್ರಕಾಶಮಾನವಾದ ಉದಯ ನಕ್ಷತ್ರವೂ ಆಗಿದ್ದೇನೆ.>>

17ಆತ್ಮನು ಮತ್ತು
22:17 ಪ್ರಕ. 21:2, 9:
ಮದಲಗಿತ್ತಿಯು, <<ಬಾ>> ಎನ್ನುತ್ತಾರೆ. ಕೇಳುವವನು, <<ಬಾ>> ಎನ್ನಲಿ. ಬಾಯಾರಿದವನು ಬರಲಿ,
22:17 ಯೆಶಾ. 55:1; ಯೋಹಾ 7:37; ಪ್ರಕ. 21:6:
ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ಉಚಿತವಾಗಿ ತೆಗೆದುಕೊಳ್ಳಲಿ.

ಸಮಾಪ್ತಿ

18ಈ ಪುಸ್ತಕದ ಪ್ರವಾದನಾ ವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನೆಂದರೆ,
22:18 ಧರ್ಮೋ. 4:2; 12:32; ಜ್ಞಾ. 30. 6:
ಇವುಗಳಿಗೆ ಯಾವನಾದರೂ ಹೆಚ್ಚು ಮಾತುಗಳನ್ನು ಕೂಡಿಸಿದರೆ, ದೇವರು ಅವನ ಮೇಲೆ ಈ ಪುಸ್ತಕದಲ್ಲಿ ಬರೆದಿರುವ ಉಪದ್ರವಗಳನ್ನು ಕೊಡುವನು.
19ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ಮಾತುಗಳಲ್ಲಿ ಒಂದನ್ನಾದರೂ ತೆಗೆದುಬಿಟ್ಟರೆ ಈ ಪುಸ್ತಕದಲ್ಲಿ ಬರೆದಿರುವ
22:19 ಪ್ರಕ. 21:2:
ಪರಿಶುದ್ಧ ಪಟ್ಟಣದಲ್ಲಿಯೂ
22:19 ಪ್ರಕ. 22:2, 14:
ಜೀವವೃಕ್ಷದಲ್ಲಿಯೂ ಅವನಿಗಿರುವ ಪಾಲನ್ನು ದೇವರು ತೆಗೆದುಬಿಡುವನು.

20ಈ ವಿಷಯಗಳಲ್ಲಿ ಸಾಕ್ಷಿ ಹೇಳುವವನು, <<ಹೌದು ನಾನು ನಿಜವಾಗಿ
22:20 ಪ್ರಕ. 22:7,12:
ಬೇಗನೇ ಬರುತ್ತೇನೆ!>> ಎಂದು ಹೇಳುತ್ತಾನೆ. ಆಮೆನ್.
22:20 2 ತಿಮೊ. 4:8:
ಕರ್ತನಾದ ಯೇಸುವೇ ಬಾ.

21ಕರ್ತನಾದ ಯೇಸುವಿನ ಕೃಪೆಯು
22:21 ಕೆಲವು ಪ್ರತಿಗಳಲ್ಲಿ ದೇವಜನರೆಲ್ಲರೊಂದಿಗೆ ಇರಲಿ ಎಂದು ಇದೆ.
ಎಲ್ಲರೊಂದಿಗೆ ಇರಲಿ. ಆಮೆನ್!

Copyright information for KanULB